ಯಕ್ಷಸಂಕ್ರಾಂತಿಯ ಫಸ್ಟ್ ಪೋಸ್ಟರ್ ರಿಲೀಸ್ ಅಗಿದೆ. ಶಾಸಕರಾದ ಗುರುವಣ್ಣ ಬಿಡುಗಡೆಗೊಳಿಸಿದರು. ಆತ್ಮೀಯ ಆಪ್ತ ಬಂಧುಗಳೆಲ್ಲರು ಸಾಥ್ ನೀಡಿದರು. ಇವರೆಲ್ಲರ ಬೆಂಬಲ ಉತ್ಸಾಹ ಹೆಚ್ಚಿಸುತ್ತದೆ. ಇನ್ನೂ ಕೂಡ ಇದರ Soft Copy ಷೇರ್ ಮಾಡಿಲ್ಲ. ಮೊನ್ನೆಯ ಸಂಕಲ್ಪ ಕಾರ್ಯಕ್ರಮಕ್ಕೆ ಬಂದವರು ನೋಡಿರುತ್ತಾರೆ. ಇವತ್ತು ರಂಗಸ್ಥಳ ಕಾರ್ಯಕ್ರಮಕ್ಕೆ ಬಂದವರಿಗೆ, ಟೀಮ್ ಕುಂದಾಪುರಿಯನ್ಸ್ ಕುಂದಾಪ್ರ ಕನ್ನಡ ಉತ್ಸವಕ್ಕೆ ಬಂದವರಿಗೆ hardcopy ಸಿಗುತ್ತದೆ.
ಸೆಪ್ಟೆಂಬರ್ 20 ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷಸಂಕ್ರಾಂತಿ!. ಇವತ್ತೆ ಕ್ಯಾಲೆಂಡರಲ್ಲಿ ಗುರುತು ಮಾಡಿಕೊಳ್ಳಿ. ದಿಗ್ಗಜ ಕಲಾವಿದರು ಇದ್ದಾರೆ, ಮಾತ್ರವಲ್ಲದೆ ಈ ಸಲದ ಯಕ್ಷಸಂಕ್ರಾಂತಿಯ ಪ್ರಸಂಗ ಮತ್ತು ಕಾಂಭಿನೆಷನ್ ಈ ಹಿಂದೆ ಕಲಾಕ್ಷೇತ್ರದಲ್ಲಿ ನೋಡಿದ್ದೇನೆ ಎಂದವರಿಗೆ ಪ್ರೀ ಟಿಕೇಟ್ ಕೊಡಲಾಗುವುದು. ಇದು ನಮ್ಮ ಸಂಯೋಜನೆಯ ಬಗೆಗೆ ನಮಗಿರುವ ಭರವಸೆ. ನಿಮ್ಮನ್ನು ಎಂದೂ ನಿರಾಶೆಗೊಳಿಸದ ಕಾರಣಕ್ಕೆ, ನೀವು ಈ ಸಲವೂ ಮಿಸ್ ಮಾಡಿಕೊಳ್ಳುವಂತಿಲ್ಲ.
ಮತ್ತೆ ಡಿಸೈನ್ ಸ್ಟಾರ್ ವಿಜಿತ್ ಮಲ್ಯಾಡಿ ಸದ್ದು ಮತ್ತು ಸುದ್ದಿ ಮಾಡಿದ್ದಾನೆ. ಮೊದಲಿಗೆ ನಾನು ನೋಡಿದವನೇ ಐದಾರು ಬಾರಿ ಮತ್ತೆ ಮತ್ತೆ ನೋಡಿದೆ. ಅಂತಹದೊಂದು ಸುಂದರ ಪೋಸ್ಟರ್ ವಿಜಿತ್ ಮಾಡಿದ್ದಾನೆ. ಇದೊಂದು ಯಕ್ಷಗಾನದ ಪೋಸ್ಟರ್ ಅನಿಸುವುದಿಲ್ಲ, ಸಿನಿಮಾ ಪೋಸ್ಟರಿಗೆ ಯಾವ ಕಮ್ಮಿಯೂ ಇಲ್ಲ. - 'ಈ ತನಕ ಈ ತರಹದ ಯಕ್ಷಗಾನ ಪೋಸ್ಟರ್ ಮಾಡಿಲ್ಲ' ಎಂದು ಪೋಸ್ಟರ್ ನೋಡಿದವರು ಹೇಳುತ್ತಿದ್ದಾರೆ. ಇದು ವಿಜಿತ್‌ಗೆ ಸಲ್ಲಬೇಕಾದ ಕ್ರೆಡಿಟ್. ಈ ತನಕ ಈ ಪ್ರಸಂಗ ನೋಡಿಲ್ಲ ಎನ್ನುವ ಪ್ರಸಂಗ ಈ ಬಾರಿ ಯಕ್ಷಸಂಕ್ರಾಂತಿಯಲ್ಲಿ ಇರಿಸಲಾಗಿದೆ. ಇದು ಯಕ್ಷಸಂಕ್ರಾಂತಿಯ ಹೆಚ್ಚುಗಾರಿಕೆ.
Stay in the loop for updates and never miss a thing. Are you interested?
Yes
No
Undo
Interested
Ticket Info
To stay informed about ticket information or to know if tickets are not required, click the 'Notify me' button below.
Advertisement
Nearby Hotels
Ravindra Kalakshetra, Ravindra Kalakshetra,Bangalore, India